ಡ್ರೆಸ್ ಮಾಸ್ಟರ್ ಅಪಾರೆಲ್ ಪ್ರೈ ಲಿ.
ಡ್ರೆಸ್ ಮಾಸ್ಟರ್ ಅಪಾರೆಲ್ ಪ್ರೈ ಲಿ. ಕಂಪನಿಯು ಗ್ಯಾಪ್ ಬ್ರಾಂಡ್ಗೆ ಉತ್ಪಾದನೆ ನಡೆಸುತ್ತಿದ್ದು ಮೇ 2020 ರಲ್ಲಿ ಮುಚ್ಚಿತು. ಈ ಮೂಲಕ ತನ್ನ 1200 ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದ್ದಲ್ಲದೆ, ಅವರಿಗೆ ಕಾನೂನು ಬದ್ಧವಾಗಿ ನೀಡಬೇಕಾದ ಪರಿಹಾರ ಮೊತ್ತ $ 346,134 ನ್ನು ವಂಚಿಸಿದೆ. ಈ ಕಂಪನಿಯು ಭಾರತದ ಮೂಲಕ ಕಂಪನಿಯಾದ ರೇಮಂಡ್ಸ್ ಲಿ. ನ ಭಾಗವಾಗಿದೆ. ರೇಮಂಡ್ಸ್ ಲಿ. ತನ್ನದೇ ಸ್ವಂತ ಮೂರು ಬ್ರಾಂಡ್ಗಳನ್ನು ಹೊಂದಿದೆ ಮತ್ತು ಇನ್ನಿತರ 5 ಬ್ರಾಂಡ್ಗಳಿಗೆ ಸಬ್ಸಿಡಯರಿಯಾಗಿ ಕೆಲಸ ಮಾಡುತ್ತಿದೆ.
ಫ್ಯಾಕ್ಟರಿಗೆ ಆರ್ಡರ್ ಇಲ್ಲ ಆದ್ದರಿಂದ ರಾಜೀನಾಮೆ ಕೊಟ್ಟು ಹೋಗಬಹುದು ಎಂದು ಕಾರ್ಮಿಕರಿಗೆ ಪುಸಲಾಯಿಸಿದ ಎರಡು ತಿಂಗಳ ಹಿಂದೆಯೇ ಆಡಳಿತವರ್ಗದವರು ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಾರಂಭಿಸಿದ್ದರು ಎಂದು ಕಾರ್ಮಿಕರು ಹೇಳಿಕೆ ನೀಡಿದ್ದಾರೆ. ಸರ್ಕಾರ ಕಡ್ಡಾಯ ಲಾಕ್ಡೌನ್ ಘೋಷಿಸಿದ್ದರಿಂದ 2020 ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕಂಪನಿಯು ಬಹುತೇಕ ಮುಚ್ಚಿತ್ತು. ಕೆಲವೇ ಕಾರ್ಮಿಕರನ್ನು ಇಟ್ಟುಕೊಂಡು ಮಾಸ್ಕ್ ಹೊಲೆದಿತ್ತು. ಮೇ 17 ರಂದು ಕಂಪನಿಯು ಮತ್ತೆ ಶುರುವಾದಾಗ ಅರ್ಧದಷ್ಟು ಕಾರ್ಮಿಕರನ್ನು ಮಾತ್ರವೇ ಕೆಲಸಕ್ಕೆ ಕರೆಯಿತು. ಜೂನ್ 2020 ರ ಹೊತ್ತಿಗೆ ಆರ್ಡರ್ ಇಲ್ಲದಿರುವುದರಿಂದ ಕಂಪನಿಯನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಗಿದೆ, ಮತ್ತೆ ತೆರೆದಾಗ ನಿಮ್ಮನ್ನೇ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಕಾರ್ಮಿಕರಿಗೆ ತಿಳಿಸಲಾಯಿತು. ನಂತರ 9 ತಿಂಗಳಾದರೂ ಕಂಪನಿ ತೆರೆಯಲಿಲ್ಲ, ಕಾರ್ಮಿಕರಿಗೆ ಅವರ ಬೋನಸ್ ಮತ್ತು ರಜೆಯ ಹಣದಂತಹ ಕಾನೂನುಬದ್ಧ ಬಾಕಿ ಬಿಟ್ಟರೆ ಯಾವ ಪರಿಹಾರವನ್ನೂ ನೀಡಲಿಲ್ಲ.
ಡ್ರೆಸ್ ಮಾಸ್ಟರ್ ಕಂಪನಿಯು ಕಾರ್ಮಿಕರಿಗೆ ಕೊಡಬೇಕಾಗಿದ್ದನ್ನೆಲ್ಲ ಕೊಟ್ಟಿದೆ ಎಂದು ಗ್ಯಾಪ್ ಹೇಳುತ್ತಿದೆ. ಆದರೆ ಕಾರ್ಮಿಕರಿಗೆ ಒಂದು ರೂಪಾಯಿಯ ಪರಿಹಾರವೂ ಸಿಕ್ಕಿಲ್ಲ ಎಂದು ಕಾರ್ಮಿಕ ಪ್ರತಿನಿಧಿಗಳು ಹೇಳುತ್ತಲೇ ಇದ್ದಾರೆ. ಡ್ರೆಸ್ ಮಾಸ್ಟರ್ ಕಂಪನಿಯ ಮಾಲೀಕರು ಗ್ಯಾಪ್ಗೆ ಸುಳ್ಳು ಮಾಹಿತಿ ನೀಡಿದೆ ಎಂದು WRC ಯು ಇದರಿಂದ ತೀರ್ಮಾನಕ್ಕೆ ಬಂದಿದೆ.
Read More:
Join our newsletter
Sign up to the WRC’s mailing list to stay updated on our work.