ಟೆಕ್ಸ್‍ಪೋಟ್ರ್ಸ್ ಕ್ರಿಯೇಶನ್ಸ್
ಗಾರ್ಮೆಂಟ್ ಉದ್ಯಮದಲ್ಲಿ ನೀಡುವ ಅತ್ಯಂತ ಕಡಿಮೆ ವೇತನದಿಂದ ಬಹುತೇಕ ಗಾರ್ಮೆಂಟ್ಸ್ ಕಾರ್ಮಿಕರು ಕೋವಿಡ್-19 ರ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಉಳಿತಾಯವೂ ಇಲ್ಲದೆ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದರು. ಗಾರ್ಮೆಂಟ್ಸ್ ಉತ್ಪಾದಿಸುವ ಬಹುತೇಕ ದೇಶಗಳು, ಕೋವಿಡ್‍ನಿಂದ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಯಾವ ನಿರುದ್ಯೋಗ ಭತ್ಯೆಯನ್ನೂ ನೀಡಲಿಲ್ಲ, ಕೆಲವು ನೀಡಿದರೂ ಅದು ಅತ್ಯಲ್ಪ ಮಟ್ಟದಲ್ಲಿ ಅಷ್ಟೇ. ಈ ಸಮಯದಲ್ಲಿ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಇದ್ದ ಭರವಸೆ ಎಂದರೆ ತಮ್ಮನ್ನು ಕೆಲಸದಿಂದ ತೆಗೆದುಹಾಕಿದಾಗ ಮಾಲೀಕರು ತಮಗೆ ನೀಡಬೇಕಾಗಿದ್ದ ಕಾನೂನುಬದ್ಧ ಪರಿಹಾರದ ಮೊತ್ತ ಅಷ್ಟೇ.
WRC ಯು ಅಧ್ಯಯನ ನಡೆಸಿದಾಗ ಕಂಡು ಬಂದದ್ದೇನೆಂದರೆ, ಕೋವಿಡ್ ಸಂದರ್ಭದಲ್ಲಿ ಕೆಲಸದಿಂದ ತೆಗೆದುಹಾಕಿದ ಕಾರ್ಮಿಕರಿಗೆ ಕಾನೂನು ಬದ್ಧ ಪರಿಹಾರ ನೀಡುವುದನ್ನು ಮಾಲೀಕರು ನಿರಾಕರಿಸಿದ್ದರು. ಇದು ಸ್ಥಳೀಯ ಕಾನೂನಿನ ಉಲ್ಲಂಘನೆಯಾಗಿತ್ತು ಮತ್ತು ಈ ಕಾರ್ಮಿಕರು ಹೊಲೆಯುತ್ತಿದ್ದ ಬ್ರಾಂಡ್ ಹಾಗೂ ರೀಟೇಲರ್‍ಗಳ ಕಾರ್ಮಿಕ ಬದ್ಧತೆಯ ನಿಯಮಗಳಿಗೂ ವಿರುದ್ಧವಾಗಿತ್ತು.
ಕೋವಿಡ್ 19 ರ ಸಂದರ್ಭದಲ್ಲಿ WRC ಯು ಹೊರತಂದ ವರದಿ “ಫೈರ್ಡ್, ದೆನ್ ರಾಬಡ್: ಫ್ಯಾಷನ್ ಬ್ರಾಂಡ್ಸ್ ಕಾಂಪ್ಲಿಸಿಟಿ ಇನ್ ವೇಜ್ ಥೆಫ್ಟ್ ಡ್ಯೂರಿಂಗ್ ಕೋವಿಡ್-19” ಯಲ್ಲಿ ಕಾರ್ಮಿಕರಿಗೆ ಕೆಲಸ ನಿರಾಕರಿಸಿದ, ಅವರ ವೇತನವನ್ನು ಕಳ್ಳತನ ಮಾಡಿದ 31 ಕಾರ್ಖಾನೆಗಳಲ್ಲಿ ಟೆಕ್ಸ್‍ಪೋರ್ಟ್ ಕ್ರಿಯೇಶನ್ ಸಹ ಒಂದಾಗಿತ್ತು. ಕೋವಿಡ್ ಸಮಯದಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದ ಈ ಕಂಪನಿಯು ಇನ್ನೂ ಸಹ ಅಂದರೆ ಏಪ್ರಿಲ್ 2021 ಆದರೂ ಕಾರ್ಮಿಕರಿಗೆ ಕಾನೂನುಬದ್ಧ ಪರಿಹಾರವನ್ನು ಕೊಟ್ಟಿಲ್ಲ.
ಮೇ 2020 ರಲ್ಲಿ ಟೆಕ್ಸ್‍ಪೋರ್ಟ್ ಕ್ರಿಯೇಶನ್ ಕಂಪನಿಯು ಮುಚ್ಚುವ ಮೂಲಕ, 750 ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿತ್ತು. ಏಪ್ರಿಲ್ 2021ರ ಹೊತ್ತಿಗೂ ಈ ಕಾರ್ಮಿಕರು ತಮಗೆ ಬರಬೇಕಾದ $216,334 ನಷ್ಟು ಮೊತ್ತದ ಕಾನೂನು ಬದ್ಧ ಪರಿಹಾರಕ್ಕೆ ಕಾಯುತ್ತಲೇ ಇದ್ದರು.
ಟೆಕ್ಸ್‍ಪೋರ್ಟ್ ಕ್ರಿಯೇಶನ್ಸ್, ಭಾರತದಲ್ಲಿ ಬೆಂಗಳೂರಿನ ಮೈಸೂರು ರಸ್ತೆಯ ರಾಜರಾಜೇಶ್ವರಿನಗರದ ಕೆಂಚೇನಹಳ್ಳಿಯ ಇಂಡಸ್ಟ್ರಿಯಲ್ ಎಸ್ಟೇಟ್, ನಂ 26/1, A2, 26/1, B2,ಇಲ್ಲಿ ನೆಲೆಯಾಗಿರುವ ಕಾರ್ಖಾನೆಯಾಗಿದೆ. ಅಂತಾರಾಷ್ಟ್ರೀಯ ಬ್ರಾಂಡ್ ಗ್ಯಾಪ್, ಜನವರಿ 2021 ರಲ್ಲಿ WRC ಗೆ ಬರೆದ ಪತ್ರದಲ್ಲಿ ಟೆಕ್ಸ್‍ಪೋಟ್ರ್ಸ್ ಕ್ರಿಯೇಶನ್ ಮಾಲೀಕರು ಕಾರ್ಮಿಕರಿಗೆ ಕಾರ್ಖಾನೆ ಮುಚ್ಚುವ ಪರಿಹಾರ ನೀಡಿರುವುದಾಗಿಯೂ, ಅದಕ್ಕೆ ಸಂಬಂಧ ಪಟ್ಟ ದಾಖಲೆಗಳನ್ನು ತಾವು ಪರಿಶೀಲಿಸಿದ್ದಾಗಿಯೂ ದೃಢಪಡಿಸಿ, ಆ ಕಾರ್ಮಿಕರಿಗೆ ಏನೇನು ಬಾಕಿ ಬರಬೇಕಿತ್ತೋ ಅವೆಲ್ಲವೂ ಸಿಕ್ಕಿದೆ ಎಂದು ಪ್ರಕರಣವನ್ನು ಮುಗಿಸಿತ್ತು. ಆದರೆ ಈ ಕಾರ್ಮಿಕರಿಗೆ ಅವರಿಗೆ ಬರಬೇಕಾದ ಬಾಕಿ ಮಾತ್ರ ಸಿಕ್ಕಿದ್ದು ಮುಚ್ಚುವ ಪರಿಹಾರ ಸಿಕ್ಕಿಲ್ಲ ಎಂದು ಸಾಕ್ಷ್ಯಗಳು ದೃಢಪಡಿಸುತ್ತವೆ.
Read More:
Join our newsletter
Sign up to the WRC’s mailing list to stay updated on our work.