ಗೋಕಲ್‍ದಾಸ್ ಇಂಡಿಯಾ
ಗೋಕಲ್‍ದಾಸ್ ಇಂಡಿಯಾ ಕಾರ್ಖಾನೆಯ ಬಾಲವಾಡಿಯಲ್ಲಿ ಕಾರ್ಮಿಕರ ಮಗುವು ಮೃತಪಟ್ಟ ದುರ್ಘಟನೆ ನಡೆದಿತ್ತು. WRC ಯ ತನಿಖೆಯಿಂದ ಕಂಡು ಬಂದದ್ದೇನೆಂದರೆ ಈ ದುರ್ಘಟನೆಯ ಸಮಯದಲ್ಲಿ ಕಾರ್ಖಾನೆಯು ಹಲವಾರು ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸಿತ್ತು; ಬಾಲವಾಡಿಯ ಸಿಬ್ಬಂದಿಗೆ ಸೂಕ್ತ ತರಬೇತಿ ಇರಲಿಲ್ಲ, ತುರ್ತು ಸಂದರ್ಭದ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಇರಲಿಲ್ಲ. ಒಂದು ಕಾರ್ಖಾನೆಯು ಇವನ್ನೆಲ್ಲ ಪಾಲಿಸಿದ್ದಿದ್ದರೆ ಮಗುವು ಮೃತ ಪಡುವುದನ್ನು ತಡೆಯಬಹುದಾಗಿತ್ತು. ಮಗುವಿನ ತಾಯಿಗೆ ಆದ ಅಪಾರ ನಷ್ಟ ಹಾಗೂ ಕಂಪನಿಯ ಆರ್ಥಿಕ ಸಂಪನ್ಮೂಲ (ಮಲ್ಟಿ ಬಿಲಿಯನ್ ಡಾಲರ್ ಖಾಸಗೀ ಆಸ್ತಿ ಹೂಡಿಕೆಯ ಸಂಸ್ಥೆಯಾದ ಬ್ಲಾಕ್‍ಸ್ಟೋನ್ ಗ್ರೂಪ್, ಗೋಕಲ್‍ದಾಸ್‍ನ ಮಾಲೀಕನಾಗಿತ್ತು) ಗಳನ್ನು ಗಮನದಲ್ಲಿಟ್ಟುಕೊಂಡು WRC ಯು ಮಗುವಿನ ತಾಯಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿತ್ತು.
ಈ ಕಾರಣದಿಂದ 2015, ಸೆಪ್ಟೆಂಬರ್ 9 ರಂದು ಗೋಕಲ್‍ದಾಸ್ ಎಕ್ಸ್‍ಪೋಟ್ರ್ಸ್ ಮತ್ತು ಬೆಂಗಳೂರು ಮೂಲಕ ಕಾರ್ಮಿಕ ಸಂಘಟನೆ ಗಾರ್ಮೆಂಟ್ ಅಂಡ್ ಟೆಕ್ಸ್‍ಟೈಲ್ ವರ್ಕರ್ಸ್ ಯೂನಿಯನ್‍ಗಳ ನಡುವೆ ಮಾತುಕತೆ ನಡೆದು, ಕಂಪನಿಯು ಮಗುವಿನ ತಾಯಿಗೆ ಹೆಚ್ಚುವರಿ ಪರಿಹಾರವಾಗಿ $ 10,500 ಗಳನ್ನು (ಸುಮಾರು 9 ವರ್ಷದ ವೇತನ) ನೀಡಲು ಒಪ್ಪ್ಪಿಕೊಂಡಿತು ಎಂದು ನಿಮಗೆ ಹೇಳಲು ನಮಗೆ ಬಹಳ ಸಂತೋಷವಾಗುತ್ತದೆ. ಸೆಪ್ಟೆಂಬರ್ 14 ರಂದು ಕಾರ್ಮಿಕರು ಈ ಪರಿಹಾರದ ಹಣವನ್ನು ಪಡೆದುಕೊಂಡರು.
Read More:
- Compensation Secured for Worker whose Child Died in Care of Factory Nursery (India) – September 17, 2015
- Safety Risks at Factory-Based Childcare Centers – June 22, 2015
- WRC Advises Licensees on Rules to Protect Workers’ Children in Factory Care – December 10, 2014
Join our newsletter
Sign up to the WRC’s mailing list to stay updated on our work.