ಏವರಿ ಡೆನಿಸನ್
ಏವರಿ ಡೆನಿಸನ್ ಕಂಪನಿಯ ಕಾರ್ಮಿಕರು ಬೆಂಗಳೂರು ಮೂಲದ ಗಾರ್ಮೆಂಟ್ ಅಂಡ್ ಟೆಕ್ಸ್‍ಟೈಲ್ ವರ್ಕರ್ಸ್ ಯೂನಿಯನ್ (GATWU) ಮೂಲಕ ಸಂಘಟಿತರಾಗಿ ತಮ್ಮನ್ನು ಅಧಿಕೃತ ಕಾರ್ಮಿಕ ಪ್ರತಿನಿಧಿಗಳನ್ನಾಗಿ ಪರಿಗಣಿಸಬೇಕೆಂದು ಕೇಳಿದಾಗ ಆಡಳಿತವರ್ಗವು ಅವರ ಮೇಲೆ ನಡೆಸಿದ ದೌರ್ಜನ್ಯ ಮತ್ತು ಅನ್ಯಾಯಗಳ ವಿಷಯವಾಗಿ WRC ಯು ತನಿಖೆ ನಡೆಸಿತ್ತು. ವರದಿಯಲ್ಲಿ ವಿವರವಾಗಿ ತಿಳಿಸಿದಂತೆ ಏವರಿ ಡೆನಿಸನ್ ಕಂಪನಿಯು ಈ ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ಕಾರ್ಮಿಕರ ಸಂಘಟನಾ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸಿತ್ತು.
- ಕಾರ್ಖಾನೆಯಲ್ಲಿ ಅಸ್ತಿತ್ವದಲ್ಲಿದ್ದ ಮ್ಯಾನೇಜ್ಮೆಂಟ್ ಪರ ಯೂನಿಯನ್ನ ಮುಖಂಡರಿಗೆ ಅಕ್ರಮ ರೀತಿಯಲ್ಲಿ ಹಣ ಪಾವತಿಸಿದ್ದು ಮತ್ತು GATWU ಮೂಲಕ ಪ್ರಾತಿನಿಧಿತ್ವ ಬಯಸಿದ್ದ ಕಾರ್ಮಿಕರ ಪ್ರಯತ್ನಗಳ ವಿರುದ್ಧ ಇನ್ನೊಂದು ಯೂನಿಯನ್ನ ಸದಸ್ಯರನ್ನು ಎತ್ತಿಕಟ್ಟಿದ್ದು.
- GATWU ಬೆಂಬಲ ಸದಸ್ಯರಿಗೆ ಇನ್ನೊಂದು ಯೂನಿಯನ್ನ ಸದಸ್ಯರು ಕಾರ್ಖಾನೆಯಲ್ಲಿ ದೈಹಿಕ ಹಲ್ಲೆ ನಡೆಸಲು ಅನುಮತಿ ನೀಡಿದ್ದು, ಜೊತೆಗೆ ಅವರ ಮೇಲೆ ದೌರ್ಜನ್ಯ, ಅಪರಾಧ ಎಸಗಲು ಅವಕಾಶಕೊಟ್ಟಿದ್ದು ಮತ್ತು ಮನೆಗಳನ್ನು ತೆರವುಗೊಳಿಸುತ್ತೇವೆಂದು ಬೆದರಿಕೆ ಒಡ್ಡಲು ಅವಕಾಶ ನೀಡಿದ್ದು;
- ಕಾರ್ಮಿಕರ ಶಾಂತಿಯುತ ಸಂಘಟನಾ ಚಟುವಟಿಕೆಗಳ ಮೇಲೆ ಬೆದರಿಕೆ ಒಡ್ಡುವ ರೀತಿಯಲ್ಲಿ ಅಕ್ರಮವಾಗಿ ಕಣ್ಗಾವಲಿಟ್ಟಿದ್ದು.
ಈ ವರದಿಯನ್ನು WRC ಯು, ಏವರಿಡೆನಿಸನ್ ಕಂಪನಿ, ಕೊಲಂಬಿಯಾ (ಕಾಲೇಜ್ ಲೈಸೆನ್ಸ್ ಪಡೆದ ಬ್ರಾಂಡ್) ಮತ್ತು ಇತರ ಬ್ರಾಂಡ್‍ಗಳೊಂದಿಗೆ ಹಂಚಿಕೊಂಡಿತು. ನಂತರ ಏವರಿಡೆನಿಸನ್ WRC ಯನ್ನು ಸಂಪರ್ಕಿಸಿ ತನ್ನ ನಡವಳಿಕೆಯನ್ನು ತಿದ್ದಿಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿತು. ಕೊನೆಗೆ ಕಾರ್ಖಾನೆಯಲ್ಲಿ ಅಸ್ತಿತ್ವದಲ್ಲಿದ್ದ ಯೂನಿಯನ್ ಜೊತೆಗೆ GATWU ವನ್ನೂ ಕಾರ್ಮಿಕರ ಪ್ರತಿನಿಧಿಯನ್ನಾಗಿ ಮಾನ್ಯಮಾಡಿತು. ಎರಡೂ ಯೂನಿಯನ್‍ಗಳ ಆಯ್ದ ಸದಸ್ಯರ ಜಂಟಿ ಸಮಿತಿಯೊಂದಿಗೆ ಸಾಮೂಹಿಕ ಚೌಕಾಸಿ ನಡೆಸಿ ಹೊಸ ವೇತನ ಒಪ್ಪಂದ ಮಾಡಿಕೊಂಡಿತು. ಈ ವೇತನ ಒಪ್ಪಂದದಲ್ಲಿ ಕಾರ್ಮಿಕರ ವೇತನ ಹಾಗೂ ಇನ್ನಿತರ ಸೌಲಭ್ಯಗಳಲ್ಲಿ ಗಣನೀಯ ಸುಧಾರಣೆ ಕಂಡಿದೆ.
Read more:
- WRC Factory Assessment re: Avery Dennison – March 11, 2020
Join our newsletter
Sign up to the WRC’s mailing list to stay updated on our work.