ಶಾಹಿ ಎಕ್ಸ್ಪೋಟ್ರ್ಸ್
2009ರ ಮಾರ್ಚ್ ನಲ್ಲಿ ಸರ್ಕಾರವು ಗಾರ್ಮೆಂಟ್ಸ್ ಉದ್ಯಮಕ್ಕೆ ಕನಿಷ್ಠವೇತನ ಹೆಚ್ಚಿಸಿ ಒಂದು ವರ್ಷ ಕಳೆದರೂ ಬೆಂಗಳೂರಿನ ಗಾರ್ಮೆಂಟ್ಸ್ ಉತ್ಪಾದಕರು ಕಾನೂನುಬದ್ಧ ಕನಿಷ್ಠವೇತನವನ್ನು ಕಾರ್ಮಿಕರಿಗೆ ಪಾವತಿಸಲು ವಿಫಲರಾಗಿದ್ದರು. ಸಾವಿರಾರು ಕಾರ್ಮಿಕರು ತಮ್ಮ ಕಾನೂನುಬದ್ಧ ಗಳಿಕೆಯಿಂದ ವಂಚಿತರಾಗಿದ್ದರು. ಸುಮಾರು 50,000 ಕಾರ್ಮಿಕರನ್ನು ಹೊಂದಿದ ಶಾಹಿ ಎಕ್ಸ್ಪೋಟ್ರ್ಸ್ ಬೆಂಗಳೂರಿನ ಪ್ರಮುಖ ಗಾರ್ಮೆಂಟ್ಸ್ ಕಂಪನಿಗಳಲ್ಲಿ ಒಂದಾಗಿದೆ. ಸರ್ಕಾರ ನಿಗದಿ ಪಡಿಸಿದ ಕನಿಷ್ಠವೇತನವನ್ನು ಪಾವತಿಸಿಸದೇ ಇರುವುದನ್ನು WRC ಯು ಸಾಕ್ಷಿ ಸಮೇತ ಶಾಹಿ ಎಕ್ಸ್ಪೋಟ್ರ್ಸ್ ಮುಂದೆ ಹಾಜರು ಪಡಿಸಿದಾಗ, ಶಾಹಿ ಆಡಳಿತವರ್ಗದವರು ತಾವು ಕನಿಷ್ಠವೇತನ ಕಾನೂನನ್ನು ಉಲ್ಲಂಘಿಸಿರುವುದನ್ನು ಮುಕ್ತವಾಗಿ ಒಪ್ಪಿಕೊಂಡರು, ಮತ್ತು ಬೆಂಗಳೂರಿನ ಗಾರ್ಮೆಂಟ್ಸ್ ಉದ್ಯಮದಲ್ಲಿ ಇದು ಸಾಮಾನ್ಯ ನಡವಳಿಕೆಯಾಗಿದೆ ಎಂದು ಹೇಳಿದ್ದರು. ಸರ್ಕಾರವು ಯಾರದ್ದೋ ಮಾತು ಕೇಳಿ ಕನಿಷ್ಠವೇತನವನ್ನು ಹೆಚ್ಚಿಸಿದೆ, ತಾವು ಅದನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಆಗ್ರಹಿಸಿದ್ದೇವೆಂದು ಕನಿಷ್ಠವೇತನ ಪಾವತಿಸದ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.
ಗಾರ್ಮೆಂಟ್ಸ್ ಉತ್ಪಾದಕರು ಕನಿಷ್ಠವೇತನವನ್ನು ಪಾವತಿಸದೇ ಇರುವ ಈ ವಿಷಯವನ್ನು WRC ಯು ಅನಾವರಣಗೊಳಿಸಿದ ಫಲವಾಗಿ ಸುಮಾರು 110,000 ಕ್ಕೂ ಹೆಚ್ಚು ಕಾರ್ಮಿಕರು ಹಿಂಬಾಕಿಯೊಂದಿಗೆ ತಮ್ಮ ಹಕ್ಕುಬದ್ಧ ಕನಿಷ್ಠವೇತನವನ್ನು ಪಡೆದುಕೊಂಡರು ಎಂದು ಹೇಳಲು ನಮಗೆ ಸಂತೋಷವಾಗುತ್ತದೆ. ಈ ಕಾರ್ಮಿಕರಲ್ಲಿ ಯೂನಿವರ್ಸಿಟಿ ಬ್ರಾಂಡ್ಗಳಿಗೆ ಮತ್ತು ಅಮೆರಿಕಾದ ಪ್ರಮುಖ ಬ್ರಾಂಡ್ಗಳಿಗೆ ಉತ್ಪಾದಿಸುವವರೂ ಇದ್ದರು. ಈಗ ಇಡೀ ಬೆಂಗಳೂರಿನಾದ್ಯಂತ ಗಾರ್ಮೆಂಟ್ಸ್ ಕಂಪನಿಗಳು ಕಾರ್ಮಿಕರಿಗೆ ಕಾನೂನಬದ್ಧ ವೇತನವನ್ನು ಪಾವತಿಸುತ್ತಿವೆಯೇ ಎಂಬುದನ್ನು WRC ಯು ಖಾತ್ರಿಪಡಿಸಿಕೊಂಡಿದೆ.
Read More:
- WRC Update: Back Pay for More Than 110,000 Workers in Bangalore – December 2, 2010
- Update on Minimum Wage Violations in Bangalore, India – April 28, 2010
- Preliminary Report on Minimum Wage Violations in Bangalore, India – March 4, 2010
- Wal-Mart Minimum Pay in Bangalore Criticised – March 18, 2010
- Questions Over Labour Standards at Wal-Mart’s Indian Suppliers – March 15, 2010
- Walmart Suppliers in Minimum Wage Controversy – March 15, 2010
Join our newsletter
Sign up to the WRC’s mailing list to stay updated on our work.