ಗಾರ್ಡನ್ ಸಿಟಿ ಫ್ಯಾಷನ್ಸ್
ಗಾರ್ಮೆಂಟ್ ಉದ್ಯಮದಲ್ಲಿ ನೀಡುವ ಅತ್ಯಂತ ಕಡಿಮೆ ವೇತನದಿಂದ ಬಹುತೇಕ ಗಾರ್ಮೆಂಟ್ಸ್ ಕಾರ್ಮಿಕರು ಕೋವಿಡ್-19 ರ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಉಳಿತಾಯವೂ ಇಲ್ಲದೆ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದರು. ಗಾರ್ಮೆಂಟ್ಸ್ ಉತ್ಪಾದಿಸುವ ಬಹುತೇಕ ದೇಶಗಳು, ಕೋವಿಡ್ನಿಂದ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಯಾವ ನಿರುದ್ಯೋಗ ಭತ್ಯೆಯನ್ನೂ ನೀಡಲಿಲ್ಲ, ಕೆಲವು ನೀಡಿದರು ಅದು ಅತ್ಯಲ್ಪ ಮಟ್ಟದಲ್ಲಿ ಅಷ್ಟೇ. ಈ ಸಮಯದಲ್ಲಿ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಇದ್ದ ಭರವಸೆ ಎಂದರೆ ತಮ್ಮನ್ನು ಕೆಲಸದಿಂದ ತೆಗೆದುಹಾಕಿದಾಗ ಮಾಲೀಕರು ತಮಗೆ ನೀಡಬೇಕಾಗಿದ್ದ ಕಾನೂನುಬದ್ಧ ಪರಿಹಾರದ ಮೊತ್ತ ಅಷ್ಟೇ.
WRC ಯು ಅಧ್ಯಯನ ನಡೆಸಿದಾಗ ಕಂಡು ಬಂದದ್ದೇನೆಂದರೆ, ಕೋವಿಡ್ ಸಂದರ್ಭದಲ್ಲಿ ಕೆಲಸದಿಂದ ತೆಗೆದುಹಾಕಿದ ಕಾರ್ಮಿಕರಿಗೆ ಕಾನೂನು ಬದ್ಧ ಪರಿಹಾರ ನೀಡುವುದನ್ನು ಮಾಲೀಕರು ನಿರಾಕರಿಸಿದ್ದರು. ಇದು ಸ್ಥಳೀಯ ಕಾನೂನಿನ ಉಲ್ಲಂಘನೆಯಾಗಿತ್ತು ಮತ್ತು ಈ ಕಾರ್ಮಿಕರು ಹೊಲೆಯುತ್ತಿದ್ದ ಬ್ರಾಂಡ್ ಹಾಗೂ ರೀಟೇಲರ್ಗಳ ಕಾರ್ಮಿಕ ಬದ್ಧತೆಯ ನಿಯಮಗಳಿಗೆ ವಿರುದ್ಧವಾಗಿತ್ತು.
ಕೋವಿಡ್ 19 ರ ಸಂದರ್ಭದಲ್ಲಿ WRC ಯು ಹೊರತಂದ ವರದಿ “ಫೈರ್ಡ್, ದೆನ್ ರಾಬಡ್: ಫ್ಯಾಷನ್ ಬ್ರಾಂಡ್ಸ್ ಕಾಂಪ್ಲಿಸಿಟಿ ಇನ್ ವೇಜ್ ಥೆಫ್ಟ್ ಡ್ಯೂರಿಂಗ್ ಕೋವಿಡ್-19” ಯಲ್ಲಿ ಕಾರ್ಮಿಕರಿಗೆ ಕೆಲಸ ನಿರಾಕರಿಸಿದ, ಅವರ ವೇತನವನ್ನು ಕಳ್ಳತನ ಮಾಡಿದ 31 ಕಾರ್ಖಾನೆಗಳಲ್ಲಿ ಗಾರ್ಡನ್ ಸಿಟಿ ಫ್ಯಾಶನ್ಸ್ ಸಹ ಒಂದಾಗಿತ್ತು. ಕೋವಿಡ್ ಸಮಯದಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದ ಈ ಕಂಪನಿಯು ಇನ್ನೂ ಸಹ ಅಂದರೆ ಏಪ್ರಿಲ್ 2021 ಆದರೂ ಕಾರ್ಮಿಕರಿಗೆ ಕಾನೂನುಬದ್ಧ ಪರಿಹಾರವನ್ನು ಕೊಟ್ಟಿಲ್ಲ.
ಮೇ 2020 ರಲ್ಲಿ ಗಾರ್ಡನ್ ಸಿಟಿ ಫ್ಯಾಶನ್ ಕಂಪನಿಯು ಮುಚ್ಚುವ ಮೂಲಕ, 4500 ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿತ್ತು. ಏಪ್ರಿಲ್ 2021ರಲ್ಲೂ ಈ ಕಾರ್ಮಿಕರು ತಮಗೆ ಬರಬೇಕಾದ $778, 803 ನಷ್ಟು ಮೊತ್ತದ ಕಾನೂನು ಬದ್ಧ ಪರಿಹಾರಕ್ಕೆ ಕಾಯುತ್ತಲೇ ಇದ್ದರು. ಗಾರ್ಡನ್ ಸಿಟಿ ಫ್ಯಾಷನ್ಸ್ ಕಂಪನಿಯು ಭಾರತದ ಬೆಂಗಳೂರಿನಲ್ಲಿರುವ ಯಶವಂತ ಪುರದ ಇಂಡಸ್ಟ್ರಿಯಲ್ ಸಬರ್ಬ್ನ ನಂ 84 ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಮಿಕರು C&A ಮತ್ತು JC Penney ಬ್ರಾಂಡ್ಗಳಿಗೆ ಉಡುಪು ತಯಾರಿಸುತ್ತಿದ್ದರೆಂದು ಗಾರ್ಮೆಂಟ್ ಅಂಡ್ ಟೆಕ್ಸ್ಟೈಲ್ ವರ್ಕರ್ಸ್ ಯೂನಿಯನ್ (GATWU) WRC ಗೆ ಮಾಹಿತಿ ನೀಡಿತ್ತು. C&A ಯು ಏಪ್ರಿಲ್ 2020 ರಲ್ಲಿ ತನ್ನ ಸಪ್ಲೈಯರ್ಗಳನ್ನು ಅನಾವರಣ ಗೊಳಿಸಿದಾಗ ಅದರಲ್ಲಿ ಗಾರ್ಡನ್ ಸಿಟಿ ಫ್ಯಾಷನ್ ಯೂನಿಟ್ II, III, IV ಮತ್ತು V ಗಳು ಇದ್ದವೆಂದು ಹೇಳಿದೆ. Guess ಬ್ರಾಂಡ್ನ ಆಮದು ದಾಖಲೆಯಲ್ಲಿ ಏಪ್ರಿಲ್ 2020 ರಲ್ಲಿ ಅವರು ಗಾರ್ಡನ್ ಸಿಟಿ ಕಾರ್ಖಾನೆಯಿಂದ ಶಿಪ್ಮೆಂಟ್ ತರಿಸಿಕೊಂಡಿರುವುದಾಗಿ ಹೇಳಲಾಗಿದೆ. ಗಾರ್ಡನ್ ಸಿಟಿ ಫ್ಯಾಶನ್ ಕಂಪನಿಯು C&A, Guess, Debenhams, Cecil, Next, Forever 21, Esprit, Mufti ಮತ್ತು Dunnes Stores ಮುಂತಾದುವುಗಳು ತನ್ನ ಪ್ರಮುಖ ಭಾಗಿದಾರರು ಎಂದು ಹೇಳಿದೆ.
Read More:
Join our newsletter
Sign up to the WRC’s mailing list to stay updated on our work.